Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದ ನೂತನ ಬ್ರಹ್ಮರಥ ಸಮರ್ಪಣೆ



ಸುರತ್ಕಲ್: ಗಣೇಶಪುರ ಶ್ರೀ ಮಹಾಗಣಪತಿ ದೇವಸ್ಥಾನದ ನೂತನ ಬ್ರಹ್ಮರಥ ಸಮರ್ಪಣೆ ಕಾರ್ಯಕ್ರಮ ಮಂಗಳವಾರ ನಡೆಯಿತು.ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ನೂತನ ಬ್ರಹ್ಮ ರಥದಲ್ಲಿ ಬ್ರಹ್ಮ ರಥೋತ್ಸವ ನಡೆದಿದ್ದು, ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು. ಶ್ರೀ ಮಹಾಗಣಪತಿ ಆರೊಢನಾಗಿದ್ದ ಬ್ರಹ್ಮರಥವನ್ನು ಭಕ್ತರು ಎಳೆದು ಸಂಭ್ರಮಿಸಿದರು. ಬ್ರಹ್ಮಶ್ರೀ ಶಿವಪ್ರಸಾದ್ ತಂತ್ರಿ ಬ್ರಹ್ಮರಥೋತ್ಸವದ ನೇತೃತ್ವ ವಹಿಸಿದ್ದರು.

ಶಾಸಕ ಡಾ.ಭರತ್ ಶೆಟ್ಟಿ ವೈ,ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ, ಬ್ರಹ್ಮಕಲ ಶೋತ್ಸವ ಮತ್ತು ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷ ಯಾದವ ಕೋಟ್ಯಾನ್ ಪೆರ್ಮುದೆ, ಕಾರ್ಯಾಧ್ಯಕ್ಷ ಪ್ರಶಾಂತ್ ಮೂಡಾಯಿಕೋಡಿ, ಪ್ರಧಾನ ಕಾರ್ಯದರ್ಶಿ ಪಿ.ಸದಾಶಿವ ಐತಾಳ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಕುಮಾರ್ ಭಂಡಾರಿ, ಎ.ವಾದಿರಾಜ, ಜಿ.ಕೆ.ಸುಂದರ್, ಪ್ರಧಾನ ಅರ್ಚಕ ಸುನಿಲ್ ಭಟ್, ದಯಾನಂದ, ಹೊನ್ನಯ್ಯ ಕೋಟ್ಯಾನ್, ಅನುರಾಧ, ಹೇಮಾವತಿ, ಸಮಿತಿಯ ಗೌರವಾಧ್ಯಕ್ಷರು, ಗೌರವ ಸಲಹೆಗಾರರು, ಮಹಾ ಪೋಷಕರು, ಪದಾಧಿ ಕಾರಿಗಳು, ನಾನಾ ಉಪಸಮಿತಿ ಸಂಚಾಲಕರು, ಸದಸ್ಯರು ಉಪಸ್ಥಿತರಿದ್ದರು.