Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ರೈಲು ಹಳಿಯ ಮೇಲೆ ಬೀಳುತ್ತಿದ್ದ ಹಿರಿಯ ಪ್ರಯಾಣಿಕ,ರಕ್ಷಿಸಿದ ರೈಲ್ವೇ ಸಿಬ್ಬಂದಿ

ಸುರತ್ಕಲ್ : ರೈಲ್ವೇ ನಿಲ್ದಾಣದಲ್ಲಿ ರೈಲು ಹತ್ತುವಾಗ ಆಕಸ್ಮಿಕವಾಗಿ ಕಾಲು ಜಾರಿ ರೈಲು ಹಳಿಯ ಮೇಲೆ ಬೀಳುತ್ತಿದ್ದ ಹಿರಿಯ  ಪ್ರಯಾಣಿಕರನ್ನು ಕರ್ತವ್ಯನಿರತ ಪಾಯಿಂಟ್ಸ್‌ಮನ್ ಜಗದೀಶ್ ಮತ್ತು ಸ್ಟೇಷನ್ ಮಾಸ್ಟ‌ರ್ ಮನೋಜ್ ಶೆಟ್ಟಿ ರಕ್ಷಸಿದ್ದಾರೆ.

ರೈಲು ಸಂಖ್ಯೆ 12620 ಹಾದು ಹೋಗುವಾಗ, ಚಲಿಸುವ ರೈಲಿನಿಂದ ಬೀಳಲು ಸಿದ್ದರಾಗಿದ್ದ ಹಿರಿಯ ಪ್ರಯಾಣಿಕರೊಬ್ಬರನ್ನು  ಸ್ಟೇಷನ್ ಮಾಸ್ಟರ್ ಮನೋಜ್ ಶೆಟ್ಟಿ ಮತ್ತು ಸುರತ್ಕಲ್ ನಿಲ್ದಾಣದ ಪಾಯಿಂಟ್ ಮ್ಯಾನ್ ಜಗದೀಶ್ ಅವರು ರಕ್ಷಸಿದರು. ರೈಲ್ವೇ ಸಿಎಂಡಿ ಸಂತೋಷ್ ಕುಮಾರ್ ಝಾ ಅವರು ಇಬ್ಬರಿಗೂ ಸ್ಥಳದಲ್ಲೇ ತಲಾ 5000 ರೂಪಾಯಿಗಳ ಬಹುಮಾನವನ್ನು ಮಂಜೂರು ಮಾಡಿದ್ದಾರೆ.