Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮೂಲ್ಕಿ:ಪುನರ್ ಪ್ರತಿಷ್ಠಾ ಕಲಶಾಭಿಷೇಕ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತಕ್ಕೊಳಪಟ್ಟ ಮೂಲ್ಕಿಯ ಬಪ್ಪನಾಡು ಗ್ರಾಮದ  ಕೊಳಚಿಕಂಬಳ ಶ್ರೀ ಜಾರಂದಾಯ  ಧೂಮಾವತಿ ದೈವಸ್ಥಾನದಲ್ಲಿ ಶ್ರೀ ಜಾರಂದಾಯ ದೈವದ  ಕುದುರೆಯ  ಬೆಳ್ಳಿಯ ಮುಖವಾಡ .ಕಣ್ಣಿಗೆ ಬಂಗಾರದ ಹೊದಿಕೆ ಹಾಗೂ ಕಾಲಿನ  ಬೆಳ್ಳಿಯ ಖಡಗದ ಸಮರ್ಪಣೆಯ  ಪುನರ್ ಪ್ರತಿಷ್ಠಾ ಕಲಶಾಭಿಷೇಕವು  ಆದಿತ್ಯವಾರ    ವೃಷಭ ಲಗ್ನದಲ್ಲಿ ಬಪ್ಪನಾಡು ಕ್ಷೇತ್ರದ  ತಂತ್ರಿಗಳಾದ ಬ್ರಹ್ಮಶ್ರೀ ಶಿಬರೂರು ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ  ಬಪ್ಪನಾಡು ಕ್ಷೇತ್ರದ ಅರ್ಚಕ ನರಸಿಂಹ ಭಟ್‌ ಉಪಸ್ಥಿತಿಯಲ್ಲಿ  ನಡೆಯಿತು. ಈ ಸಂದರ್ಭ ಊರ ಗುರಿಕಾರರು.ಸೇವಾ ಸಮಿತಿ. ಮಹಿಳಾ ಮಂಡಳಿ.ಯೂತ್ ಕ್ಲಬ್ ನ ಅಧ್ಯಕ್ಷರು,ಪದಾದಿಕಾರಿಗಳು ಉಪಸ್ಥಿತರಿದ್ದರು.