Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ ಅರಮನೆ ವೆಲ್ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ನ - "ಅರಸು ರಕ್ಷಕ್ ಯೋಜನೆ" ಸಹಾಯಧನ ವಿತರಣೆ

ಮೂಲ್ಕಿ:ಮುಲ್ಕಿ ಅರಮನೆ ವೆಲ್ಫೇರ್ ಮತ್ತು ಚಾರಿಟೇಬಲ್ ಟ್ರಸ್ಟ್ ನ - "ಅರಸು ರಕ್ಷಕ್ ಯೋಜನೆ" ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರ ನೇತೃತ್ವದಲ್ಲಿ ನಡೆಯುತ್ತಿದ್ದು,ಈ ಯೋಜನೆಯ ಮಾರ್ಚ್ ತಿಂಗಳ ಫಲಾನುಭವಿಯಾಗಿ ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ತೋಕೂರು ಗ್ರಾಮದ ಕಂಬಳಬೆಟ್ಟು ನಿವಾಸಿ ನಾರಾಯಣ ಯಾನೆ ಸೋನೆ ಇವರ ಮನೆ ನಿರ್ಮಾಣಕ್ಕೆ   10,000 ರೂ   ಸಹಾಯಧನ ವನ್ನು ನೀಡಲಾಯಿತು.ಅರಮನೆಯ  ಗೌತಮ್ ಎಂ ಜೈನ್, ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷೆ  ಕುಸುಮಾ ಚಂದ್ರಶೇಖರ್, ಉಪಾಧ್ಯಕ್ಷ ಹೇಮಂತ್, ಪಂಚಾಯತ್ ಸದಸ್ಯರಾದ ವಿನೋದ್. ಯಸ್. ಸಾಲ್ಯಾನ್, ಮಿಥುನ್ ಅಮೀನ್, ಕಾರ್ತಿಕ್. ಪಿ.ರಾವ್  ಮೊದಲಾದವರು ಉಪಸ್ಥಿತರಿದ್ದರು.