ಹವ್ಯಾಸಿ ಭಾಗವತ ಕೊಡೆತ್ತೂರು ಕೆಳಗಿನ ಮನೆ ಸಂಜೀವ ಶೆಟ್ಟಿ ನಿಧನ
Tuesday, April 8, 2025
ಕಿನ್ನಿಗೋಳಿ:ಕೊಡೆತ್ತೂರು ಕೆಳಗಿನ ಮನೆ ಸಂಜೀವ ಶೆಟ್ಟಿ (83) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾದರು.ಪ್ರಗತಿಪರ ಕೃಷಿಕರಾಗಿದ್ದ ಅವರು ಹವ್ಯಾಸಿ ಭಾಗವತರಾಗಿದ್ದರು.
ನಡುಗೋಡು ಶಾಲಾ ಯಕ್ಷಗಾನ ಮಂಡಳಿಯ ಪ್ರಧಾನ ಭಾಗವತರಾಗಿದ್ದರು. ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನದ ಬ್ರಹ್ಮಕಲಶೊತ್ಸವದ ಯಶಸ್ಸಿಗೆ ಶ್ರಮಿಸಿದ್ದರು.
ಪಟ್ಲ ಪೌಂಡೇಷನ್ ಎಕ್ಕಾರು ಘಟಕದಿಂದ ಸನ್ಮಾನ ಹಾಗೂ ಹಲವಾರು ಸಂಘ ಸಂಸ್ಥೆಯಿಂದ ಸನ್ಮಾನ ಗೌರವವನ್ನು ಪಡೆದಿದ್ದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.