Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಎಪ್ರಿಲ್ 13 - 20: ಕಟೀಲು ಉತ್ಸವ


ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ತಾ. 13 ರಿಂದ 20 ರವರೆಗೆ ವರ್ಷಾವಧಿ ಉತ್ಸವ ನಡೆಯಲಿದೆ.
ತಾ. 13 ರಂದು ಧ್ವಜಾರೋಹಣ, ತಾ. 14ರಂದು ಯುಗಾದಿ ದೀಪದ ಬಲಿ, ತಾ.15ರಂದು ಭ್ರಾಮರೀವನದಲ್ಲಿ ಪ್ರತಿಷ್ಟಾವರ್ಧಂತಿ, ಸಂಜೆ ಮೂಡು ಸವಾರಿ, ತಾ. 16 ಕ್ಕೆ ದೀಪದ ಬಲಿ, ತಾ. 17 ಕ್ಕೆ ಬೆಳ್ಳಿ ರಥೋತ್ಸವ, ತಾ.18ಕ್ಕೆ ಬ್ರಹ್ಮರ ಸನ್ನಿಧಿಯಲ್ಲಿ ಪರ್ವ, ಪಡುಸವಾರಿ, ತಾ.19 ಕ್ಕೆ ಬೆಳಿಗ್ಗೆ 9:45 ಕ್ಕೆ ರಥೋತ್ಸವ, ರಾತ್ರಿ ಶಯನ, ತಾ.20ಕ್ಕೆ ಕವಾಟೋದ್ಘಾನೆ, ರಾತ್ರಿ ಆರಟ, ಬ್ರಹ್ಮರಥೋತ್ಸವ, ಸೂಟೆದಾರ ನಡೆಯಲಿದೆ. ಉತ್ಸವದ ಎಲ್ಲ ದಿನಗಳಲ್ಲೂ ಚಿನ್ನದ ಪಲ್ಲಕಿ ಉತ್ಸವ, ಚಿನ್ನದ ರಥೋತ್ಸವ ನಡೆಯುತ್ತದೆ. ಪ್ರತಿ ದಿನ ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳು ಭಜನೆಗಳು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸರಸ್ವತೀ ಸದನದಲ್ಲಿ ನಡೆಯಲಿವೆ.