Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಿನ್ನಿಪದವು ರಿಕ್ಷಾ ನಿಲ್ದಾಣದ ಉದ್ಘಾಟನೆ

ಬಜಪೆ:ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ರವರ 2024 - 25 ನೇ ಸಾಲಿನ ಶಾಸಕರ ಅನುದಾನದಿಂದ ನಿರ್ಮಿಸಲಾದ ಬಜಪೆಯ  ಕಿನ್ನಿಪದವು ರಿಕ್ಷಾ ನಿಲ್ದಾಣವನ್ನು  ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ಉದ್ಘಾಟಿಸಿದರು.
ಈ ವೇಳೆ  ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಹಾಗೂ ಕಿನ್ನಿಪದವು  ರಿಕ್ಷಾ ಚಾಲಕ ಮಾಲಕರ ಸಂಘದ ವತಿಯಿಂದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹಾಗೂ ಜಿಲ್ಲಾ  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ರೊನಾಲ್ಡ್ ಫೆರ್ನಾಡೀಸ್  ಪೆರ್ಮುದೆ ಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ  ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕ ಸಿರಾಜ್ ಬಜ್ಪೆ ,ಸಹ ಸಂಚಾಲಕ  ಇಸ್ಮಾಯಿಲ್ ಇಂಜಿನಿಯರ್,ಬಜ್ಪೆ ಸರ್ಕಲ್ ಇನ್ಸ್ ಫೆಕ್ಟರ್  ಸಂದೀಪ್ ,ರಾಜ್ಯ ದಲಿತ ಸಂಘದ ಸಂಚಾಲಕ  ದೇವದಾಸ್,ಮುಲ್ಕಿ ಮೂಡಬಿದ್ರೆ ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷ ನಿಸಾರ್ ಕರಾವಳಿ,ಕಾಂಗ್ರೆಸ್ ಮುಖಂಡರಾದ ರೊನಾಲ್ಡ್ ಫೆರ್ನಾಡೀಸ್ ,ನಿಸಾರ್ ಕರಾವಳಿ ,ವಿಜಯ ಗೋಪಾಲ್ ಸುವರ್ಣ ,
ಜೇಕಬ್ ಪಿರೇರಾ ,ಖಾದರ್ ಏರ್ಪೋರ್ಟ್. ಎಸ್ ಡಿ ಪಿಐ  ರಾಜ್ಯ ಮುಖಂಡ  ಅಥಾವುಲ್ಲಾ ಜೋಕಟ್ಟೆ ,ಹಸೈನಾರ್ ,ಎಂಜೆಎಮ್  ಮಸೀದಿಯ ಅಧ್ಯಕ್ಷ  ಅಬ್ದುಲ್ ಖಾದರ್,ಹಿರಿಯರಾದ ಮೊನಕ ,ಗುತ್ತಿಗೆದಾರ ಅಬೂಬಕ್ಕರ್ ಸಿದ್ದಿಕ್ ,ಸ್ಥಳೀಯ  ಸಂಘ ಸಂಸ್ಥೆಗಳ ಮುಖಂಡರುಗಳು ಹಾಗೂ ಮೊದಲಾದವರು ಉಪಸ್ಥಿತರಿದ್ದರು.