Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಉಚಿತ ಆರೋಗ್ಯ ತಪಾಸಣಾ ಶಿಬಿರ

ಮೂಲ್ಕಿ: ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಬಜಪೆ ತಾಲೂಕು, ಪ್ರಗತಿ ಬಂಧು  ಸ್ವಸಹಾಯ ಸಂಘಗಳ ಒಕ್ಕೂಟ ಕಿಲ್ಪಾಡಿ  ವಲಯ, ಶ್ರೀನಿವಾಸ್ ಇನ್ವಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್, ಮುಕ್ಕ ಇವರ ಸಂಯುಕ್ತ ಆಶ್ರಯದಲ್ಲಿ, ಉಚಿತ ಆರೋಗ್ಯ ತಪಾಸಣಾ ಶಿಬಿರವು   ಕೆಎಸ್ ರಾವ್ ನಗರ ದ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯಿತು. 
ಈ ಸಂದರ್ಭ  ಮುಲ್ಕಿ ನಗರ ಪಂಚಾಯತ್ ನ ಅಧ್ಯಕ್ಷ ಸತೀಶ್ ಅಂಚನ್ ,  ಜನಜಾಗೃತಿ ವೇದಿಕೆಯ  ಸದಸ್ಯ ಧನಂಜಯ ಪಿ ಶೆಟ್ಟಿಗಾರ್ , ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ದ ಉಪಾಧ್ಯಕ್ಷ ಹರಿಶ್ಚಂದ್ರ ಕೋಟ್ಯಾನ್ , ಮುಲ್ಕಿ ನಗರ ಪಂಚಾಯತ್ ಸದಸ್ಯ ಮಂಜುನಾಥ ಕಂಬಾರ ,ಒಕ್ಕೂಟದ ಅಧ್ಯಕ್ಷ  ಉಷಾ ಹರೀಶ್,ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ , ತಾಲೂಕು ಯೋಜನಾಧಿಕಾರಿ ಗಿರೀಶ್ , ಸುರಕ್ಷ ಸಮನ್ವಯ ಅಧಿಕಾರಿ ನಾಗರಾಜ್,  ಮೇಲ್ವಿಚಾರಕರು,  ತಾಲೂಕು ಜ್ಞಾನವಿಕಾಸ ಸಮನ್ವಯ ಅಧಿಕಾರಿ, ತಾಲೂಕು ನೋಡಲ್ ಅಧಿಕಾರಿ, ವಲಯದ ಸೇವಾ ಪ್ರತಿನಿಧಿಗಳು, ವಲಯದ ವಿಎಲ್ಎ ಗಳು  ಉಪಸ್ಥಿತರಿದ್ದರು. ಯೋಜನಾಧಿಕಾರಿ ಗಿರೀಶ್  ಸ್ವಾಗತಿಸಿದರು.  ಸಮನ್ವಯಾಧಿಕಾರಿ ಶೋಭಾ  ಕಾರ್ಯಕ್ರಮ ನಿರೂಪಿಸಿ,ಧನ್ಯವಾದವಿತ್ತರು.