Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕವತ್ತಾರು: ವಿಶೇಷ ಪೂಜೆ, ನಾಗ ಪ್ರತಿಷ್ಠೆ ಮತ್ತು ಮುಷ್ಠಿ ಕಾಣಿಕೆ ಸಮರ್ಪಣೆ

ಕಿನ್ನಿಗೋಳಿ:ಸಿರಿ ಅಬ್ಬಗ ದಾರಗ  ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕವತ್ತಾರು ಆದಿ‌ ಆಲಡೆ ಇಲ್ಲಿನ ಜೀರ್ಣೋದ್ದಾರದ ಪೂರ್ವಭಾವಿಯಾಗಿ  ಶ್ರೀ ಮಹಾಲಿಂಗೇಶ್ವರ ದೇವರಿಗೆ  ವಿಶೇಷ ಪೂಜೆ, ನಾಗ ಪ್ರತಿಷ್ಠೆ ಮತ್ತು ಮುಷ್ಠಿ ಕಾಣಿಕೆ ಸಮರ್ಪಣೆಯು  ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ   ನಡೆಯಿತು.
ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ  ಪ್ರಧಾನ ಅರ್ಚಕ ಲಕ್ಷೀನಾರಾಯಣ ಆಸ್ರಣ್ಣ, ವೇದವ್ಯಾಸ ತಂತ್ರಿ, ದೇವಳದ ಪ್ರಧಾನ ಅರ್ಚಕ ದೇಂದಡ್ಕ ವಿಷ್ಣುರಾಜ್ ಭಟ್ ರವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಈ ಸಂದರ್ಭ  ದೇವೇಶ್ ಭಟ್, ವಿಶ್ವೇಶ ಭಟ್ ಸುರಗಿರಿ,  ದೇವಳದ ಆಡಳಿತ ಮೋಕ್ತೇಸರ ನೀನಾ ನಿತ್ಯಾನಂದ ಅಜಿಲ, ನಿತ್ಯಾನಂದ ಶೆಟ್ಟಿ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷೆ ಬಳ್ಕುಂಜೆಗುತ್ತು ಮಲ್ಲಿಕಾ ಯಶವಂತ ಶೆಟ್ಟಿ , ಪ್ರಧಾನ‌ ಕಾರ್ಯದರ್ಶಿ ದಿನಕರ ಶೆಟ್ಟಿ ಬಳ್ಕುಂಜೆ,  ಅಶೋಕ್ ಶೆಟ್ಟಿ ಕವತ್ತಾರು ಸುದೀಪ್ ಅಜಿಲ, ಬಳ್ಕುಂಜೆ ಬಂಡಸಾಲೆ ಯೋಗೀಶ್ವರ ಕೆ ಶೆಟ್ಟಿ, ಶರತ್ ಅಜಿಲ, ದೆಪ್ಪುಣಿಗುತ್ತು ಗುತ್ತಿನಾರ್ ಸುಧಾಕರ ಶೆಟ್ಟಿ, ರಾಮದಾಸ್ ಶೆಟ್ಟಿ ಬಾಳಿಕೆ ಮನೆ, ಕೃಷ್ಣ ಶೆಟ್ಟಿ ಕಾಡಬರಿ, ಪ್ರಸಾದ್ ಅಜಿಲ ಮತ್ತಿತರರು ಉಪಸ್ಥಿತರಿದ್ದರು.